ಕಾಡ್ ಮೀನು ಗ್ಯಾಡಿಡೀ ಕುಟುಂಬಕ್ಕೆ ಸೇರಿದ ಗೇಡಸ್ ಎಂಬ ವೈಜ್ಞಾನಿಕ ನಾಮದ ಮೀನುಗಳಿಗೆ ಇರುವ ಸಾಮಾನ್ಯವಾದ ಹೆಸರು. ಇದರಲ್ಲಿ ಸುಮಾರು ೩೦ ಪ್ರಭೇದಗಳಿವೆ. == ಪ್ರಮುಖ ಪಂಗಡಗಳು == ಇದರಲ್ಲಿ ಮೂರು ಮುಖ್ಯ ಪಂಗಡಗಳನ್ನು ಗುರುತಿಸಿದ್ದಾರೆ.ಅವುಗಳ ಹೆಸರು ಮತ್ತು ಲಕ್ಷಣಗಳು ಕೆಳಗಿನಂತಿವೆ. == ಭೌಗೋಳಿಕ ಹಂಚಿಕೆ == ಆಟ್ಲಾಂಟಿಕ್ ಕಾಡ್ ಮೀನುಗಳು ಉತ್ತರ ಅಟ್ಲಾಂಟಿಕ್ ಪ್ರದೇಶದ ಆಳ ಸಾಗರಗಳಲ್ಲಿ ಹೆಚ್ಚಿನ ಶೀತ ನೀರಿನಲ್ಲಿ ವಾಸಿಸುತ್ತವೆ. ಪೆಸಿಫಿಕ್ ಕಾಡ್ ಮೀನುಗಳು ಪೂರ್ವ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಗಳಲ್ಲಿ ಕಂಡುಬರುತ್ತವೆ. == ಸಂತಾನೋತ್ಪತ್ತಿ == ಅಟ್ಲಾಂಟಿಕ್ ಕಾಡ್ ಮೀನುಗಳು ಸುಮಾರು ೬೬೦ ಆಡಿ ಆಳ ಸಮುದ್ರದಲ್ಲಿ ಒಂದು ನಿರ್ದಿಷ್ಟ ಮೈದಾನದಲ್ಲಿ ಜನವರಿಯಿಂದ ಎಪ್ರಿಲ್ ತಿಂಗಳ ನಡುವೆ ಮೊಟ್ಟೆ ಇಡುತ್ತವೆ.೪ ಡಿಗ್ರಿಯಿಂದ ೬ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವು ಇದಕ್ಕೆ ಸೂಕ್ತವಾಗಿದೆ. == ಆಹಾರವಾಗಿ == ಕಾಡ್ ಮೀನುಗಳು ಒಂದು ಉತ್ತಮ ಆಹಾರವಾಗಿದೆ.ಬಿಳಿಯ ಮೃದುವಾದ ಮಾಂಸ ಮತ್ತು ಸೌಮ್ಯ ಪರಿಮಳವನ್ನು ಹೊಂದಿದೆ.ಇದರ ಯಕೃತ್ತಿನಿಂದ ಪಡೆಯುವ ಕಾಡ್ ಲಿವರ್ ಎಣ್ಣೆಯು ವಿಟಮಿನ್ ಎ, ವಿಟಮಿನ್ ಡಿ ಮತ್ತು ವಿಟಮಿನ್ ಇ ಮತ್ತು ಇತರ ಕೆಲವು ಪೋಷಕಾಂಶಗಳ ಆಗರವಾಗಿದೆ. == ಬಾಹ್ಯ ಸಂಪರ್ಕಗಳು == 2016-02-01 ವೇಬ್ಯಾಕ್ ಮೆಷಿನ್ ನಲ್ಲಿ. . – , 2012-05-01 ವೇಬ್ಯಾಕ್ ಮೆಷಿನ್ ನಲ್ಲಿ. – (, 2MB) 2012-03-11 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==